Rating:
5
 Naaneke obba Hindu - ನಾನೇಕೆ ಒಬ್ಬ ಹಿಂದೂ

Naaneke obba Hindu - ನಾನೇಕೆ ಒಬ್ಬ ಹಿಂದೂ

The Science of Sanatana Dharma- ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ ....

by Veda Athavale, Udaylal Pai (1 review, add another)
Type: Print Book
Genre: Politics & Society, Religion & Spirituality
Language: Kannada
Price: Rs.450.00 + shipping
Preview
Price: Rs.450.00 + shipping

Processed in 3-5 business days. Shipping Time Extra
Also Available From
Flipkart / Amazon.in
Description of " Naaneke obba Hindu - ನಾನೇಕೆ ಒಬ್ಬ ಹಿಂದೂ "

This book ' ನಾನೇಕೆ ಒಬ್ಬ ಹಿಂದೂ' [ Why am I a Hindu - Udaylal Pai ] is a simple gateway to understanding the uncomplicated ways of otherwise seemingly complex Sanatana Dharma through conversations between the author and his friends or readers. The author explains the science, logic and rational of Sanatana Dharma in a very simple, lucid and reader-friendly style. The hardcore Vedic philosophy is made ridiculously simple for the beginners.This would be the best gift you can present to the younger generation to understand the science of Sanatana Dharma to begin with following which it can be practiced in daily life to avoid stress and lead a peaceful happy life.

About the author(s)

Veda Athavale is a teacher by profession and a continuous learner by passion . Basically, she is a part time volunteer with Sanskrit Bharathi Bangalore, an international organisation working for the revival of Sanskrit Language. She is very active on social media and occasionally writes for Kannada daily Prajavani. You can read Veda on her blog spot ' Antardrushti' where she writes mainly about women , children and other social issues.[ http://antardrushti.blogspot.in. ]

Udaylal Pai [ http://www.udaypai.in/about] is a freelance journalist , writer and researcher. As a journalist his specialization has been technology and finance. As a writer he writes mostly about the human experiences and how it can be useful for the young generation to lead a happy peaceful and blessed life.

Book Details
ISBN: 
9781775156536
Publisher: 
Pothi.com
Number of Pages: 
297
Dimensions: 
5.5 inch x 8.5 inch
Interior Pages: Black & White
Binding: Paperback (Perfect Binding)
Availability: In Stock (Print on Demand)
Other Books in Politics & Society, Religion & Spirituality
Chanakya's LAST MOVE
Chanakya's LAST MOVE
by Sai R. Vaidyanathan
साईं महिमा
साईं महिमा
by योग्यता जैन
From Dior to Dharma
From Dior to Dharma
by Shruti Bakshi
Reviews of " Naaneke obba Hindu - ನಾನೇಕೆ ಒಬ್ಬ ಹಿಂದೂ "
Write another review

ಡಾ . ಚಂದ್ರಶೇಖರ ದಾಮ್ಲೆ , ಸುಳ್ಯ

"ನನಗೆ ಹಿಂದೂ ಅಂತ ಹೇಳಿಕೊಳ್ಳಲು ಮುಜುಗರವಾಗುತ್ತದೆ" ಎಂದು ತಥಾಕಥಿತ ಬುದ್ಧಿಜೀವಿಗಳು ಪ್ರಸಿದ್ಧಿಗಾಗಿ ಹೇಳುತ್ತಾರೆ. ಅಂತಹವರು ಮತ್ತು ಅವರ ಅಂಧಾಭಿಮಾನಿಗಳು "ಯಾಕೆ ತಾವು ಮುಜುಗರಗೊಳ್ಳಬೇಕಾಗಿಲ್ಲ" ಎಂತ ತಿಳಿಯಲು ಉದಯಲಾಲ್ ಪೈಯವರ “Why Am I a Hindu” ಎಂಬ ಕೃತಿಯನ್ನು ಓದಬೇಕು. ಆಂಗ್ಲ ಭಾಷೆಯಲ್ಲಿರುವ ಆ ಕೃತಿಯನ್ನು "ನಾನೇಕೆ ಒಬ್ಬ ಹಿಂದೂ" ಎಂಬ ಶಿರೋನಾಮೆಯಲ್ಲಿ ಶ್ರೀಮತಿ ವೇದಾ ಆಠವಳೆಯವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಇದು ಹಿಂದೂ ಧರ್ಮದ ಕುರಿತಾಗಿ ಇರುವ ಅನೇಕ ಸಂದೇಹಗಳು ಹಾಗೂ ಆಕ್ಷೇಪಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಉಪಯುಕ್ತವಾದ ಕೃತಿಯಾಗಿದೆ.

“Who is a Hindu” ಎಂಬ ವೀರ ಸಾವರ್ಕರ್ ಅವರ ಕೃತಿಯನ್ನು ಓದಿರುವ ಹಿಂದುತ್ವವಾದಿಗಳಿಗೆ ಆಕರ್ಷಕವೆನ್ನಿಸುವ ಈ ಕೃತಿಯ ಶಿರೋನಾಮೆಯು ಓದುಗರಲ್ಲಿ ಮೂಡಿಸ ಬಹುದಾದ ಊಹನೆಗಳಿಗಿಂತ ಹೆಚ್ಚಿನ ವಿಸ್ತಾರದ ವಿಚಾರ ವಿಮರ್ಶೆಗಳು ಕೃತಿಯಲ್ಲಿವೆ. ಹಾಗೆಯೇ ಹಿಂದೂ ವಿರೋಧಿ ಮನೋಭಾವನೆಯವರೂ ಇದನ್ನು ಓದಿದರೆ ಅವರು ತಮ್ಮ ಚಿಂತನೆಯನ್ನು ಸುಧಾರಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಒಂದೆಡೆಯಿಂದ ಕಟ್ಟರ್ ಹಿಂದುತ್ವವಾದಿಗಳ ಚಿಂತನೆಗಳನ್ನು ಹಳಿಗೆ ತರುವ ಮತ್ತು ಹಿಂದು ವಿರೋಧಿ ಚಿಂತಕರ ಟೀಕೆಗಳ ಮೊನಚನ್ನು ಮುರಿಯುವ ಶಕ್ತಿ ಪೈಯವರ ಲೇಖನಗಳಲ್ಲಿದೆ. ಅಂದರೆ ವೈಚಾರಿಕತೆ, ವಿಜ್ಞಾನ, ನಿಸರ್ಗ, ಸರಳತೆ, ಸಂಸ್ಕಾರ, ಮನಶ್ಯಾಸ್ತ್ರ ಮುಂತಾದುವುಗಳ ಮುಖಾಮುಖಿಯಲ್ಲಿ ಹಿಂದು ಸಂಸ್ಕಾರಗಳು, ಸಂಪ್ರದಾಯಗಳು, ಆಚಾರ ಆಚರಣೆಗಳು, ನಂಬಿಕೆ-ಮೂಡಮಂಬಿಕೆಗಳು, ದೇವರ ಕಲ್ಪನೆ ಮತ್ತು ವ್ಯಾಖ್ಯಾನಗಳು, ಶಾಪ, ಗ್ರಹಚಾರ ಪರಿಹಾರ, ಜ್ಯೋತಿಷಿ-ಪುರೋಹಿತರು ಮಾಡುವ ಶೋಷಣೆ ಇತ್ಯಾದಿ ಅನೇಕ ಸಂಗತಿಗಳನ್ನು ಸತ್ಯದ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಈ ಕೃತಿಯಲ್ಲಿರುವ ನಲುವತ್ತೇಳು ಲೇಖನಗಳು ಸರಣಿ ಪರಿಕಲ್ಪನೆಗಳನ್ನು ಹೊಂದಿಲ್ಲದ ಸ್ವತಂತ್ರ ಲೇಖನಗಳಾಗಿದ್ದು ಓದುಗರು ತಮ್ಮ ಆಯ್ಕೆಯ ಯಾವ ಲೇಖನವನ್ನಾದರೂ ಓದಲಾರಂಭಿಸಬಹುದು. ಆದರೆ ಪ್ರತಿಯೊಂದು ಲೇಖನವೂ ಮತ್ತೊಂದು ಲೇಖನದ ಕಡೆಗೆ ಕಣ್ಣು ಹಾಯಿಸುವಂತೆ ಪ್ರೇರಣೆ ನೀಡುತ್ತದೆ.

ಹಿಂದೂ ಧರ್ಮದ ಬಗ್ಗೆ ತುಚ್ಛವಾಗಿ ಮಾತಾಡುವ, ಲೇವಡಿ ಮಾಡುವ, ಬೈಯುವ, ಸಂದೇಹ ವ್ಯಕ್ತಪಡಿಸುವ ತಮ್ಮ ಗೆಳೆಯರು, ಪ್ರಯಾಣಗಳಲ್ಲಿ ಆಕಸ್ಮಿಕ ಭೇಟಿಯಾದವರು, ಜಾಲತಾಣಗಳಲ್ಲಿ ಪರಿಚಯವಾದ ಅಭಿಮಾನಿಗಳು ಹೀಗೆ ಅನೇಕರು ಕೇಳಿದ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ತಮ್ಮ ಪ್ರತಿಪಾದನೆಗಳನ್ನು ಮಂಡಿಸುವ ಪೈಯವರ ವಿಧಾನವು ಓದುಗರಿಗೆ, ಅಂತೆಯೇ ಜಿಜ್ಞಾಸುಗಳಿಗೆ ನೇರವಾಗಿ ಚರ್ಚೆಯೊಳಗೆ ನುಸುಳಿಕೊಳ್ಳಲು ಸಹಾಯಕವಾಗಿದೆ. ನಿಮ್ಮ ಧರ್ಮದಲ್ಲಿಪ್ರವಾದಿಗಳೇಕಿಲ್ಲ? ಬಹುದೇವತಾರಾಧನೆ ಏಕೆ? ಪರಮ ಸತ್ಯವೆಂದರೇನು? ದೇವರು ಇದ್ದಾನೆಯೇ? ನೀವು ನಂಬುತ್ತೀರಾ? ಹಿಂದು ಧರ್ಮಕ್ಕೆ ಪವಿತ್ರ ಪುಸ್ತಕ ಯಾವುದು? ಹಿಂದೂ ದೇವರುಗಳೇಕೆ ವಿಕಾರ? ನಂಬಿಕೆಗಳ ಮೂಲವು ಕಲ್ಪನೆಗಳೇ? ಕಲ್ಪನೆಗಳಿಗೆ ಮೂಲ ಯಾವುದು? ಸೃಷ್ಟಿ, ಸ್ಥಿತಿ ಮತ್ತು ಲಯಗಳ ಕಲ್ಪನೆ ಸರಿಯೇ? ದೈವೀ ಶಕ್ತಿ ಎಂಬುದಿದೆಯೆ? ಇಂತಹ ಅನೇಕ ಪ್ರಶ್ನೆಗಳಿಗೆ ನಿರ್ಭಾವುಕರಾಗಿ ವಾಸ್ತವಿಕ ನೆಲೆಯಲ್ಲಿ ಉತ್ತರಗಳನ್ನು ನೀಡುವಾಗ ಉದಯ್‍ಲಾಲ್ ಪೈಯವರು ಪ್ರಶ್ನಿಸಿದವರ ಗೊಂದಲಗಳನ್ನು ಪರಿಹರಿಸಿದ್ದು ಸ್ಪಷ್ಟವಾಗುತ್ತದೆ. ಹಿಂದೂ ವೈದಿಕ ಸಾಹಿತ್ಯವಾದ ನಾಲ್ಕು ವೇದಗಳು, ವೇದಾಂಗಗಳು, ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಹಾಗೂ ಉಪನಿಷತ್ತುಗಳನ್ನು ಮೂಲ ಹಿಂದೂ ಚಿಂತನೆಗಳೆನ್ನುವ ಪೈಯವರು ಪುರಾಣಗಳು ಹಾಗೂ ರಾಮಾಯಣ ಮತ್ತು ಮಹಾಭಾರತ ಇತ್ಯಾದಿ ಕಾವ್ಯಗಳನ್ನು ಪೂರಕ ಸಾಹಿತ್ಯಗಳೆಂದು ಸೃಷ್ಟೀಕರಿಸಿದ್ದಾರೆ. ಹಿಂದೂ ತತ್ವ ಜ್ಞಾನಕ್ಕಾಗಿ ಮೂಲ ಸಾಹಿತ್ಯವನ್ನೇ ಅಭ್ಯಸಿಸಬೇಕೆನ್ನುವ ಅವರು ಪುರಾಣಗಳಲ್ಲಿ ಹೇಳಿದ ಕತೆಗಳನ್ನು ಅಷ್ಟೊ ಇಷ್ಟೋ ತಿಳಿದು ಹಿಂದೂ ದೇವತೆಗಳ ಅವಹೇಳನ ಮಾಡುವುದರ ವಿರುದ್ಧ ಎಚ್ಚರಿಸುತ್ತಾರೆ. ಸಹಕಾರ ತತ್ವದಡಿಯಲ್ಲಿ ಆರ್ಥಿಕತೆಯನ್ನು ರೂಪಿಸಿಕೊಂಡಿದ್ದ ನಮ್ಮ ಪೂರ್ವಜನರು ಶಿಕ್ಷಣ, ಕಲೆ, ಸಂಗೀತ ಆರೋಗ್ಯ ಹಾಗೂ ಪರಿಸರಕ್ಕೆ ಪ್ರಾಮುಖ್ಯತೆಯನ್ನಿತ್ತಿದ್ದರು. ಸ್ಥಳೀಯ ಬುಡಕಟ್ಟು ಸಮುದಾಯಗಳ ದೇವರುಗಳನ್ನು ನಿರ್ನಾಮ ಮಾಡಿ ಏಕದೇವೋಪಾಸನೆಯ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಾನುಯಾಯಿಗಳಿಗಿಂತ ಹೆಚ್ಚಿನ ವಿಚಾರ ಸ್ವಾತಂತ್ರ್ಯ ಹಿಂದುಗಳಿಗೆ ಇದೆ ಎಂಬುದಾಗಿ ಹೇಳುವ ಪೈಗಳು ಹಿಂದುಗಳಲ್ಲಿರುವ ಕಂದಾಚಾರ ಹಾಗೂ ಅಂಧ ವಿಶ್ವಾಸಗಳನ್ನು ಖಂಡಿಸುತ್ತಾರೆ. ಆದ್ದರಿಂದಲೇ ತಮ್ಮ ತರ್ಕಗಳಲ್ಲಿ ಸಮತೋಲನವನ್ನು ಕಾಪಾಡಿಕೊಂಡಿರುವ ಲೇಖಕರು ಹಿಂದೂ ಶಬ್ದದ ವ್ಯುತ್ಪತ್ತಿ ಬಹಳ ಪ್ರಾಚೀನ ಕಾಲದಲ್ಲೇ ಇತ್ತು ಎಂದು ಪ್ರತಿಪಾದಿಸುತ್ತಾರೆ. "ಧಾರಯತಿ ಇತಿ ಧರ್ಮ" ಎಂಬ ವ್ಯಾಖ್ಯಾನ ಇರುವ ಹಿಂದೂ ಧರ್ಮವು ಎಲ್ಲರಲ್ಲಿ ದೈವಿಕತೆಯ ಅಂಶವಿದೆ ಎಂದು ಸಾರುತ್ತದೆ. ಕರ್ಮಸಿದ್ಧಾಂತ ಪ್ರಕಾರ ನಾವು ಏನನ್ನು ಬಿತ್ತುತ್ತೇವೊ ಅದನ್ನು ಪಡೆಯುತ್ತೇವೆ. ಆದಿ ಅಂತ್ಯಗಳಿಲ್ಲದೆ ಶಾಶ್ವತವಾದ ಚಿಂತನೆಯೇ ಸನಾತನ ಧರ್ಮವಾಗಿದೆ. ಪುರಾಣಗಳ ಸತ್ಯತೆ, ಹಿಂದೂ ದೇವಾಲಯಗಳು, ಆಚರಣೆಗಳು- ಆರಾಧನೆಗಳು, ವಿವಾಹ, ಪ್ರೇಮ ವಿವಾಹ, ಕುಟುಂಬ ಮೌಲ್ಯ, ಸರ್ಪಾರಾಧನೆ, ನೈತಿಕತೆ - ಲೈಂಗಿಕತೆ, ದೇವರು ಮತ್ತು ಮನುಷ್ಯ, ಸಂಸ್ಕೃತ ಮತ್ತು ಬ್ರಾಹ್ಮಣ ವಿರೋಧದ ಹಿಂದಿರುವ ಅಜೆಂಡಾ, ಬ್ರಹ್ಮ, ಆಧ್ಯಾತ್ಮ, ವಿಜ್ಞಾನ ಹಾಗೂ ಮಾನವತಾ ವಾದದ ಬಗೆಯೂ ಚರ್ಚಿಸುವ ಪೈಯವರು ಹೇಳದೆ ಉಳಿದ ಹಾಗೂ ಅರ್ಧ ಹೇಳಿ ನಿಲ್ಲಿಸಿದ ಅನೇಕ ಸಂದರ್ಭಗಳಿವೆ. ಅಂತೂ ಹಿಂದುವಾಗಿರುವುದೆಂದರೆ ಮುಕ್ತ ಚಿಂತನೆಯ ಬಹುದೊಡ್ಡ ಅವಕಾಶವೆಂದು ಪ್ರತಿಪಾದಿಸಿದ್ದಾರೆ.

ನಾನೇಕೆ ಒಬ್ಬ ಹಿಂದೂ ಕೃತಿಯ ಇಂಗ್ಲಿಷ್ ಮೂಲದ ಲೇಖಕ ಉದಯಲಾಲ್ ಪೈಯವರು ಒಬ್ಬ ಸ್ವತಂತ್ರ ಪತ್ರಕರ್ತ ಹಾಗೂ ಹಿಂದೂ ಧರ್ಮದ ಕುರಿತಾಗಿ ಆಂಗ್ಲ ಭಾಷೆಯಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿದವರು. ಮೂಲತಃ ಕೇರಳದವರಾದ ಇವರು ಅಂತಾರಾಷ್ಟ್ರೀಯವಾಗಿ ಅಭಿಮಾನಿ ಬಳಗ ಹೊಂದಿದವರು. ಇನ್ನು, ಅನುವಾದಕರಾದ ಶ್ರೀಮತಿ ವೇದಾ ಅಠವಳೆ ಇವರು ಸಂಸ್ಕೃತ ಶಿಕ್ಷಕಿಯಾಗಿದ್ದು ಲೇಖಕಿ, ವಿಮರ್ಶಕಿಯಾಗಿ ಗುರುತಿಸಿಕೊಂಡವರು. ಪ್ರಸ್ತುತ ಕೃತಿಯನ್ನು ತುಂಬಾ ಸಮರ್ಥವಾಗಿ ಅನುವಾದಿಸಿದ್ದಾರೆ. ಪ್ರಾಯಶಃ ಭಾರತೀಯ ಚಿಂತನೆಯಾದುದರಿಂದ ಅವರಿಗೆ ಪೈಯವರ ಬರಹಗಳ ಹಿಂದಿನ ಚಿಂತನೆ ಹಾಗೂ ಆಶಯಗಳ ನೇರ ಸುಳಿವು ಸಿಕ್ಕಿದಂತಿದೆ. ಇದೇ ಮೂಲ ಕೃತಿಯೇನೋ ಎನ್ನುವಷ್ಟು ಅನುವಾದವು ಸುಲಲಿತವೂ ಆಗಿದೆ.. ಅಂತೂ ಹಿಂದು ಧರ್ಮದ ಬಗ್ಗೆ ಆಸ್ಥೆ ಇರುವವರೂ ಅನಾಸ್ಥೆ ಇರುವವರೂ ಓದಬೇಕಾದ ಕೃತಿ ಇದು.

Payment Options

Payment options available are Credit Card, Indian Debit Card, Indian Internet Banking, Electronic Transfer to Bank Account, Check/Demand Draft. The details are available here.